180 ಕ್ಕೂ ಹೆಚ್ಚು ದೇಶಗಳಲ್ಲಿರುವ 2 ಬಿಲಿಯನ್ಗಿಂತಲೂ ಹೆಚ್ಚಿನ ಜನರು ಯಾವುದೇ ಕ್ಷಣದಲ್ಲಿ ಮತ್ತು ಎಲ್ಲಿಯಾದರೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು WhatsApp 1 ಬಳಸುತ್ತಾರೆ. WhatsApp ಉಚಿತವಾಗಿದೆ2 ಮತ್ತು ಜಗತ್ತಿನಾದ್ಯಂತ ಇರುವ ಎಲ್ಲಾ ಫೋನ್ಗಳಲ್ಲೂ ಅತ್ಯಂತ ಸರಳವಾದ, ಸುರಕ್ಷಿತವಾದ, ವಿಶ್ವಾಸಾರ್ಹ ಮೆಸೇಜ್ ಕಳುಹಿಸುವಿಕೆ ಹಾಗೂ ಕರೆ ಮಾಡುವಿಕೆಯ ಸೌಲಭ್ಯವನ್ನು ಒದಗಿಸುತ್ತಿದೆ.
1 ಮತ್ತು ಹೌದು, WhatsApp ಎಂಬುದು What's Up ಎಂಬ ನುಡಿಗಟ್ಟಿನ ಪದಪ್ರಯೋಗವಾಗಿದೆ.
2 ಡೇಟಾ ಶುಲ್ಕಗಳು ಅನ್ವಯಿಸಬಹುದು.
WhatsApp ಅನ್ನು ಎಸ್ಎಂಎಸ್ಗೆ ಪರ್ಯಾಯವಾಗಿ ಪ್ರಾರಂಭಿಸಲಾಗಿದೆ. ನಮ್ಮ ಪ್ರಾಡಕ್ಟ್ ಈಗ ವಿಭಿನ್ನ ಮೀಡಿಯಾಗಳನ್ನು ಕಳುಹಿಸುವುದನ್ನು ಮತ್ತು ಸ್ವೀಕರಿಸುವುದನ್ನು ಬೆಂಬಲಿಸುತ್ತದೆ: ಪಠ್ಯ, ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್ಗಳು ಮತ್ತು ಸ್ಥಳ ಹಾಗೂ ವಾಯ್ಸ್ ಕಾಲ್ಗಳು. ನಿಮ್ಮ ಕೆಲವು ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ಮೂಲಕ ನೀವು ಹಂಚಿಕೊಳ್ಳುವುದರಿಂದ ನಮ್ಮ ಆ್ಯಪ್ನಲ್ಲಿ ನಾವು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್ ಅನ್ನು ರಚಿಸಿದ್ದೇವೆ. ಪ್ರತಿ ಪ್ರಾಡಕ್ಟ್ನ ತೀರ್ಮಾನದ ಹಿಂದೆ ಜನರು ಅಡೆತಡೆಗಳಿಲ್ಲದೆ ಜಗತ್ತಿನಲ್ಲಿ ಎಲ್ಲಿಯಾದರೂ ಸಂವಹನ ನಡೆಸಲು ಅವಕಾಶ ಮಾಡಿಕೊಡುವುದು ನಮ್ಮ ಆಸೆಯಾಗಿದೆ.
ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಅವರು WhatsApp ಅನ್ನು ಸ್ಥಾಪಿಸಿದರು, ಅವರು ಈ ಹಿಂದೆ Yahoo ದಲ್ಲಿ ಒಟ್ಟಾರೆ 20 ವರ್ಷಗಳನ್ನು ಕಳೆದಿದ್ದರು. WhatsApp 2014 ರಲ್ಲಿ Facebook ಗೆ ಸೇರ್ಪಡೆಗೊಂಡಿದೆ ಆದರೆ ಜಗತ್ತಿನ ಎಲ್ಲೆಡೆ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವ ಮೆಸೇಜ್ ಕಳುಹಿಸುವಿಕೆ ಸೇವೆಯನ್ನು ನಿರ್ವಹಿಸುವಲ್ಲಿ ಲೇಸರ್ ಫೋಕಸ್ನೊಂದಿಗೆ ಪ್ರತ್ಯೇಕ ಆ್ಯಪ್ನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ.